ಕಿಶನ್ ಶ್ರೀಕಾಂತ್, ಭಾರತದ ಚಿತ್ರನಟ ಹಾಗು ನಿರ್ದೇಶಕ. ಜನವರಿ ೨೦೦೪ರಲ್ಲಿ ಆಗಲೆ ೨೪ ಚಿತ್ರಗಳಲ್ಲಿ ನಟಿಸಿ ಕೇರ್ ಆಫ್ ಫುಟ್ಪಾತ್ ಎಂಬ ಚಿತ್ರವನ್ನು ನಿರ್ದೇಶಿಸಿದರು. ಇದು ತಾವೇ ಬರೆದ ಸಣ್ಣ ಕಥೆಯಿಂದ ಅಳವಡಿಸಕೊಳ್ಳಲಾಗಿತ್ತು. ನವೆಂಬರ್ ೨೦೦೬ರಲ್ಲಿ ಗಿನ್ನೆಸ್ ದಾಖಲೆಗಳ ಪುಸ್ತಕಕ್ಕೆ ಇವರು ಸೇರಿದರು - ಪ್ರಪಂಚದಲ್ಲಿ ಚಿತ್ರ ನಿರ್ದೇಶಿಸಿದ ಅತೀ ಕಿರಿಯ ಬಾಲಕ ಎಂದು. == ಜೀವನ == ಶ್ರೀಕಾಂತ್ ಹಾಗು ಶೈಲಜರವರ ಪುತ್ರರಾದ ಇವರಿಗೆ ಕಿರಣ್ ಎಂಬ ಸಹೋದರ ಇದ್ದಾರೆ. === ವಿದ್ಯಾಭಾಸ === ತಮ್ಮ ೧೦ನೇ ತರಗತಿಯಲ್ಲಿ ೯೩% ಗಳಿಸಿದ ಇವರು ಕರ್ನಾಟಕ ಸರ್ಕಾರದಿಂದ ಮೆಚ್ಚುಗೆಯನ್ನು ಪಡೆದರು. ೧೦ನೇ ತರಗತಿಯಾದ ತಕ್ಷಣ ಸರ್ಕಾರಕ್ಕೆ ಎಂ.ಏ ಪದವಿ ಮಾಡಲು ಅನುಮತಿ ಪಡೆಯಲು ಪತ್ರ ಬರೆದರು. ಅವರ ಹಾಗು ಕರ್ನಾಟಕ ಸ್ಟೇಟ್ ಓಪನ್ ವಿಶ್ವವಿದ್ಯಾಲಯದ ಒಪ್ಪಿಗೆಯ ನಂತರ ವಿಜ಼ತೂನ್ಸ್ ಕಾಲೇಜ್ ಆಫ್ ಮೀಡಿಯ ಅಂಡ್ ಡಿಸೈನ್, ಬೆಂಗಳೂರಿನಲ್ಲಿ ಎಂ.ಏ ಪದವಿಗೆ ತರಬೇತಿ ತೆಗೆದುಕೊಳ್ಳುತ್ತಿದ್ದಾರೆ. == ಆಯ್ದ ಚಿತ್ರಗಳ ಪಟ್ಟಿ == ೨೦೦೧- ಗ್ರಾಮ ದೇವತೆ ೨೦೦೨- ಲಾ ಅಂಡ್ ಆರ್ಡರ್ ೨೦೦೨- ಹಲೋ ನಾರದ ೨೦೦೨- ವಂಶಕೊಬ್ಬ ೨೦೦೩- ಸ್ವಾತಿ ಮುತ್ತು ೨೦೦೫- ಮಹಾರಾಜ ೨೦೦೫- ಜೋಗಿ ೨೦೦೬- ಕೇರ್ ಆಫ್ ಫುಟ್ಪಾತ್ ೨೦೦೬- ತುತ್ತೂರಿ ೨೦೦೭- ಐಶ್ವರ್ಯ ೨೦೦೮- ಮೊಗ್ಗಿನ ಮನಸು ೨೦೧೩- ಟೀನೇಜ್ == ಉಲ್ಲೇಖಗಳು ==